ಸೋಮವಾರ, ಮೇ 18, 2015

ಅಸ್ತಂಗತನಾದ ಅನಂತಮೂರ್ತಿಯವರಿಗೆ ಚರಮಗೀತೆ....

ಅಸ್ತಂಗತನಾದ ಅನಂತಮೂರ್ತಿಯವರಿಗೆ ಚರಮಗೀತೆ....

ಸಾಹಿತ್ಯ ಪರಿಧಿಯಿಂದ ಸಾಮಾಜಿಕ ಪ್ರಜ್ಞೆಯತ್ತ
ಸದಾ ಸಂಚಲನದ ರೂವಾರಿ ಚಿರನಿದ್ರೆಗೆ.
ಭಾವಪೂರ್ಣ ಶೃದ್ದಾಂಜಲಿ ಜ್ಞಾನಪೀಠ ಅನಂತಮೂರ್ತಿಗೆ....
* * *

ನಿಗಾಬೇಕಿರಲಿಲ್ಲ ಆಡುವ ಮಾತಿನ ಮೇಲೆ
ಹುಟ್ಟಿಸಿದರು ಒಂದಿಲ್ಲೊಂದು ವಾಗ್ವಾದದ ಅಲೆ.
ಇದುವೆ ಅನಂತಮೂರ್ತಿ ಜೀವಂತಿಕೆಯ ಸ್ಪೂರ್ತಿಯ ಸೆಲೆ...!
* * *

"ಪ್ರಧಾನಿಯಾದರೆ ಮೋದಿ ಈ ದೇಶದೊಳಗಿರಲಾರೆ..."
ಆಡಿದ ಮಾತಿಗೆ ತಪ್ಪಲಿಲ್ಲ ಅನಂತಮೂರ್ತಿ
ಮರಳಿಬಾರದೂರಿಗೆ ಹೊರಟರು ಪಯಣ ಎಂತಹಾ ಬದ್ದತೆ !
* * *

ಅಗ್ರಹಾರದಲಿ ಹುಟ್ಟಿದ ಅನಂತ ವೃಕ್ಷದ
ಬೇರುಗಳು ಬ್ರಾಹ್ಮಣ್ಯದ ಸತ್ವ ಹೀರಿಕೊಂಡು
ಜ್ಯಾತ್ಯಾತೀತ ಫಲ ನೀಡಿದ್ದೆಂತಾ ಅಚ್ಚರಿ !
* * *

ಹಾರವರ ಬೀದಿಯಿಂದ ಹಾರಿಬಂದ ಅನಂತಹಕ್ಕಿ
ಊರು ಕೇರಿ ಸುತ್ತಿ ಜಗದಗಲ ಕಲರವ
ಪರೀಧಿಯಾಚೆಯ ಪಯಣದಲಿ ಸದಾ ತಲ್ಲಣದ ಭಾವ !
* * *

ಕೊಡಲಿ ಕಾವು ಕುಲಕ್ಕೆ ಮೂಲ...
ಕೋಮುವಾದಿಗಳಿಗೆ ಅನಂತಮೂರ್ತಿ ಧಾವಾನಲ
ಸಾವಿನಲ್ಲೂ ಸಂಭ್ರಮಿಸುವ ಚಡ್ಡಿಗಳನ್ನು ಹಿಡಿದು ಒದೀರಲಾ !
* * *

ಸುಖಾ ಸುಮ್ಮನಿರುವ ಸಾಹಿತಿಗಳಿಗಿಂತ
ಸದಾ ಸಂಚಲನ ಹುಟ್ಟಿಸುವ ಅನಂತಮೂರ್ತಿ ಮೇಲು.
ಕೋಮುವಾದಿಗಳಿಗೆ ಕುಲಬಾಂಧವನೇ ಬಲು ದೊಡ್ಡ ಸವಾಲು !
* * *

ಶ್ರೇಷ್ಟ ಸಾಹಿತಿಗಳಿಗೆ ರಾಷ್ಟ್ರಕವಿ, ಜ್ಞಾನಪೀಠ ಕಿರೀಟ
ಇಟ್ಟು ಸಂಭ್ರಮಿಸಿದೆ ಕರುನಾಡು, ಆದರೆ ಇದೆಂತಾ ವಿಪರ್ಯಾಸ ನೋಡು....
ಕಲೆಯ ಬೀಡಾಗುವ ಬದಲು 'ಕಲಾಗ್ರಾಮ'ವಾಗುತ್ತಿದೆ ಸುಡುಗಾಡು !



-      -- ಶಶಿಕಾಂತ ಯಡಹಳ್ಳಿ  
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ