ಶನಿವಾರ, ಮೇ 23, 2015

ಸಖಿ ಗೀತೆ....181

ಸಖಿ....

ನೂರು
ಮಾತುಗಳ
ನಡುವೆ
ಮೌನವೇ
ಲೇಸು...!

ಮಾತಾಡಲೇ
ಬೇಕೆಂದರೆ
ಬರಿ
ಕಿರುನಗೆಯ
ಸೂಸು...!!

ಕಲ್ಲು ಕಲ್ಲು
ಮಸೆದಾಗ
ಹುಟ್ಟುವುದು
ಸುಡುಸುಡುವ
ಕಿಡಿ
ಮಾತಿಗೆ
ಮಾತು
ಹೊಸೆದಾಗ
ಮನಸ್ತಾಪದ
ದಾಂಗುಡಿ....!!!

ಮಿತವಾದ
ಮಾತು
ಹಿತವಾದ
ನಗು
ಬದುಕಾಗಲಿ...
ಮಾತಿನ
ಸೂತಕ
ಕಳೆದು
ಮನವೆಲ್ಲಾ
ಬೆಳಕಾಗಲಿ...!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ