ಶನಿವಾರ, ಮೇ 23, 2015

ಸಖಿ ಗೀತೆ....180

ಸಖಿ....

ಸತ್ಯವನ್ನೇ
ಹೇಳುತ್ತೇನೆಂದು
ಕೋರ್ಟಿನಲ್ಲಿ
ಆಣೆ ಪ್ರಮಾಣ
ಮಾಡೋವರಲ್ಲೂ
ಸುಳ್ಳರಿದ್ದಾರೆಂದು
ಗೊತ್ತಿದ್ದೂ
ಒತ್ತಾಯದಿಂದ
ಧರ್ಮಗ್ರಂಥದ
ಮೇಲೆ ಅಂಗೈ
ಇಡಿಸೋದ್ಯಾಕೆ?

ಸತ್ಯ ಸುಳ್ಳುಗಳ
ಸತ್ಯಾಸತ್ಯತೆಗಳನ್ನು
ಸಾಕ್ಷಿ ಪುರಾವೆ
ವಾದ ವಿಚಾರಣೆಗಳು
ತೀರ್ಮಾನಿಸುವುದರಿಂದ
ಪ್ರಯೋಜನಕ್ಕಿಲ್ಲದ
ಆಣೆ ಪ್ರಮಾಣಗಳ್ಯಾಕೆ?

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ