ಶನಿವಾರ, ಮೇ 23, 2015

ಸಖಿ ಗೀತೆ.... 176

ಸಖಿ....

ಆಗ
ಜೊತೆಯಲಿ
ಅವಳಿರಲಿಲ್ಲ
ಮನದಲಿ
ನೆನಪುಗಳಿದ್ದವು..
ಕಣ್ಣಲಿ
ಕನಸುಗಳಿದ್ದವು
ಕವಿತೆಗಳು
ಹುಟ್ಟಿಕೊಂಡವು...!

ಈಗ
ಅವಳು ಸದಾ
ಜೊತೆ ಜೊತೆಯಲಿ
ಮನಸುಗಳು
ಮುದುಡಿದವು
ಕನಸುಗಳು
ಕಮರಿದವು
ಕವಿತೆಗಳು
ಮುನಿಸಿಕೊಂಡವು.....!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ