ಶನಿವಾರ, ಮೇ 23, 2015

ಸಖಿ ಗೀತೆ....172

ಸಖಿ.....

ಉತ್ತರಗಳನ್ನು
ಹುಡುಕುತ್ತಾ
ಹೋದಂತೆಲ್ಲಾ
ಪ್ರಶ್ನೆಗಳ ಸ್ವರೂಪ
ಬದಲಾಗುತ್ತದೆ,
ಯಾಕೆಂದರೆ
ಬದುಕು ಸಂಕೀರ್ಣ....!

ನಾನು ನನ್ನದು
ನನ್ನಿಂದ ಎಂದೆಲ್ಲಾ
ಅಹಂಕಾರದಿಂದ
ಮೆರೆಯುವ
ಮನುಷ್ಯನ
ಜೀವನವೇ
ಅಪೂರ್ಣ......!!

ಇಲ್ಲಿ ಯಾವುದೂ
ಅಂತಿಮವಲ್ಲ,
ಯಾವುದೂ
ಪರಮ ಸತ್ಯವಲ್ಲ
ಎಲ್ಲವೂ ಕಾಲಕ್ಕೆ ತಕ್ಕಂತೆ
ಬದಲಾಗಲೇಬೇಕು
ಯಾವುದೂ ಇಲ್ಲಿಲ್ಲ
ಪರಿಪೂರ್ಣ.....!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ