ಶನಿವಾರ, ಮೇ 23, 2015

ಸಖಿ ಗೀತೆ.....155

ಸಖಿ..

ಕಾಲು ದಾರಿಯಲಿ
ಕ್ರಮಿಸಿದಷ್ಟು
ದೂರವೆನಿಸುವ
ನಮ್ಮೂರು...

ತುಂಬಾ ಹತ್ತಿರವೆಂದು
ಗೊತ್ತಾಗಿದ್ದೇ ನೀ
ಕೈ ಹಿಡಿದು
ಜೊತೆ ನಡೆದಾಗ....!

ಒಲವಿನ ದಾರಿಯಲಿ
ಚಲಿಸಿದಷ್ಟು
ಸುಂದರವೆನಿಸುವ
ಬದುಕು...

ತುಂಬಾ ಭಾರವೆಂದು
ಗೊತ್ತಾಗಿದ್ದೇ ನೀ
ಮುನಿಸಿಕೊಂಡು
ದೂರವಾದಾಗ....!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ