ಶನಿವಾರ, ಮೇ 23, 2015

ಸಖಿ ಗೀತೆ.....194

ಸಖಿ....

ತಳುಕು
ಹಾಕಿಕೊಂಡ
ನೆನಪುಗಳ
ಸಿಕ್ಕು
ಬಿಡಿಸಿಕೊಳ್ಳಲೆಂದೇ
ಮಲಗುತ್ತೇನೆ....!

ಬಿಟ್ಟೆನೆಂದರೂ
ಬಿಡದೀ ಮಾಯೆ
ಮೆಲಕು ಹಾಕಿದಷ್ಟು
ಸಿಕ್ಕಲ್ಲಿ
ಸಿಕ್ಕಾಕಿಕೊಂಡು
ತಲ್ಲಣಿಸುತ್ತೇನೆ...

ಬಂದವರು ಬಂದಂತೆ
ಮರಳಿದ್ದರಿದ್ದಿಲ್ಲ ಬಾಧೆ,
ಹೋಗುವಾಗ ಮನದೊಳಗೆ
ನೆನಪುಗಳ ಬೀಜ ಬಿತ್ತಿ
ಬೇರೂರುವುದೇ ತಗಾದೆ....!!

ಹಾದಿಯ
ಮುಳ್ಳೆತ್ತಿದಂತಲ್ಲ
ಮನದೊಳಗೆ
ಬೇರಿಳಿದ ನೆನಪುಗಳಿಂದ
ಮುಕ್ತರಾಗುವುದು....!!

ದಾರಿತೋರು
ದೊರೆಯೇ
ಅದು ಹೇಗೆ ಈ
ಹಳವಂಡಗಳಿಂದ
ಪರಿತ್ಯಕ್ತರಾಗುವುದು...!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ