ಶನಿವಾರ, ಮೇ 23, 2015

ಸಖಿ ಗೀತೆ....192

ಸಖಿ...

ಹುಟ್ಟಿದ ಮಕ್ಕಳೆಲ್ಲಾ
ದಷ್ಟಪುಷ್ಟವಾಗಿರೊಲ್ಲ,
ಬಿತ್ತಿದ ಬೀಜಗಳೆಲ್ಲಾ
ಮೊಳೆತು ಬೆಳೆಯೊಲ್ಲ....!

ಹಾಗೆಯೇ....

ಸವೆಸಿದ ಹಾದಿಯೆಲ್ಲಾ
ಗುರಿ ತಲುಪೋದಿಲ್ಲ,
ಬರೆದ ಕವನಗಳೆಲ್ಲಾ
ಜನಮನ ಕಲಕೋದಿಲ್ಲ....!!

ಹತ್ತರಲ್ಲೊಂದು
ಮುತ್ತಿನಂತಾ ಕವಿತೆ...
ಹುಟ್ಟಿಬಂದರೆ ಸಾಕು
ಕವಿ ಬದುಕಲ್ಲದೆ ಸಾರ್ಥಕತೆ...!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ