ಶನಿವಾರ, ಮೇ 23, 2015

ಸಖಿ ಗೀತೆ....157

ಸಖಿ..

ನನಗೂ ಎಲ್ಲರನ್ನೂ
ಸುಖಾ ಸುಮ್ಮನೆ
ಹೊಗಳುತ್ತಾ
ಸಿಕ್ಕಸಿಕ್ಕವರ ಮುಂದೆ
ಹಲ್ಕಿರಿಯುತ್ತಾ
ಒಳ್ಳೆಯವನೆಂದೆನಿಸಿಕೊಳ್ಳುವಾಸೆ...

ಆದರೆ ಅದ್ಯಾಕೋ
ಮನಸ್ಸು
ಒಪ್ಪುತ್ತಿಲ್ಲ...!

ಅಧಿಕಾರಸ್ತರಿಗೆ
ತಲೆಬಾಗಿ
ಅಧಿಕಪ್ರಸಂಗಿಗಳ ಮಾತಿಗೆ
ತಲೆದೂಗಿ
ವಿದೇಯನೆನಿಸಿಕೊಳ್ಳುವಾಸೆ

ಆದರೆ ....
ಸ್ವಾಭಿಮಾನ
ಅನುಮತಿಸುತ್ತಿಲ್ಲ...!!

ಕಳ್ಳ ಸ್ವಾಮಿಗಳ
ಕಾಲಿಡಿದು,
ವಂಚಕ ಆಸಾಮಿಗಳಿಗೆ
ಕೈಮುಗಿದು
ಅವಕಾಶವಾದಿಯಾಗುವಾಸೆ

ಆದರೆ ....
ಮಾನವೀಯತೆ
ಬಿಡಲಾಗುತ್ತಿಲ್ಲ.

ಕಳ್ಳ ಸುಳ್ಳ ಸ್ವಾರ್ಥಿ
ರಾಜೀಕೋರರ
ಸಂತೆಯಲ್ಲಿ
ಸಂತನಾಗಿರುವಾಸೆ...

ಆದರೂ ಅನ್ಯಾಯ
ಪ್ರತಿಭಟಿಸದೇ
ಸುಮ್ಮನಿರಲಾಗುತ್ತಿಲ್ಲ...!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ