ಶನಿವಾರ, ಮೇ 23, 2015

ಸಖಿ ಗೀತೆ....185

ಸಖಿ...

'ನಾನು' ಎನ್ನುವ
ಬಣ್ಣದ ಕನ್ನಡಕ
ಹಾಕಿಕೊಂಡವರ
ಕಣ್ಣ ಕೊಳದೊಳಗೆ
ಆಹಂಕಾರದ
ಹೂಳು.....

ಕಣ್ಣತುಂಬಾ
ಆತ್ಮರತಿಯ
ಧೂಳು....

ಅಹಂಕಾರದ
ಹೂಳೆತ್ತಿ,
ಆತ್ಮರತಿಯ
ಪೊರೆ ಕಳಚಿ,
ಮನುಷ್ಯರಾಗುವ
ಬಗೆ ಹೇಗೆ ಹೇಳಿ
ಗುರುಬಸವ
ಮಹಾಪ್ರಭುವೇ

ಇಂದು
ಬಸವ ಜಯಂತಿ
ಕಳೆದುಕೊಳ್ಳೋಣ
ಮನದ ಮುಂದನ
ಭ್ರಾಂತಿ....!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ