ಶನಿವಾರ, ಮೇ 23, 2015

ಸಖಿ ಗೀತೆ....204

ಸಖಿ..

ಯಾರೂ ನಿನ್ನ
ನಂಬುವುದಿಲ್ಲೆಂದು
ಆರೋಪಿಸುವುದೆಂತಾ
ವರಸೆ....?

ಮೊದಲು
ನಿನ್ನಲ್ಲಿ
ನಿನಗಿರಲಿ
ಭರವಸೆ ....!

ಬಿಟ್ಟು ಬಿಸಾಕು
ಇಲ್ಲದ ಭ್ರಮೆ,
ನಿಂದಕರಿಗೂ
ಇರಲಿ ಕ್ಷಮೆ....!!

ಅಳುಕಲೇಕೆ
ಸರಿಯಿದ್ದರೆ ದಾರಿ?
ಅಂಜಬೇಕೆ
ಸ್ಪಷ್ಟವಾಗಿದ್ದರೆ ಗುರಿ?

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ