ಶನಿವಾರ, ಮೇ 23, 2015

ಸಖಿ ಗೀತೆ.... 167

ಸಖಿ...

ಕೋಪ ತಾಪ
ಅಸೂಯೆ ಅಸಹನೆ
ದುರಾಲೋಚನೆಗಳೆಂಬೋ
ತ್ಯಾಜ್ಯಗುಣಗಳ
ಸಂಗ್ರಹಿಸೋಕೆ
ನಮ್ಮ ಮೆದುಳೇನು
ಕಾರ್ಪೋರೇಶನ್
ತೊಟ್ಟೀನಾ...?

ಮನುಷ್ಯನ
ಮೆದುಳೆಂಬೋ
ಮಹಾಲಯದಲ್ಲಿ
ಪ್ರೀತಿ ಕರುಣೆ
ಸಹಕಾರ ಸಹನೆ
ಸಹಬಾಳ್ವೆಗಳ ತುಂಬಿ
ಮೊದಲು
ಮನುಷ್ಯರಾಗೋಣ...!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ