ಶನಿವಾರ, ಮೇ 23, 2015

ಸಖಿ ಗೀತೆ.... 158

ಸಖೀ....

ಚಿಕ್ಕಪುಟ್ಟ ಕ್ಷುಲ್ಲಕ
ಸಂಗತಿಗಳಿಗೂ ನಾನು
ಬಿದ್ದುಬಿದ್ದು ನಗುತ್ತೇನೆಂದರೆ
ಬೇಸರ ಮಾಡಿಕೊಳ್ಳದಿರು ಗೆಳತಿ...
ಒಂಟಿತನದ ನೋವು
ಒಳಗಿದೆ...ನಗುವಾಗಿ
ಹೊರಗೆ ಬರಲಿ ಬಿಡು....!

ಸಣ್ಣಪುಟ್ಟ ನೋವುಗಳಿಗೆ
ಭಾವುಕನಾಗುತ್ತೇನೆಂದು
ದೂರಿ ದೂರಾಗದಿರು ಗೆಳತಿ...
ಸಂಕಟಗಳ ಸರಮಾಲೆ
ಹೃದಯ ತುಂಬಿದೆ
ಕಣ್ಣೀರಾಗಿ ಹರಿದು
ಹೋಗಲಿ ಬಿಡು.....!!

ನಿರ್ಲಕ್ಷಿತ ಸಂಗತಿಗಳಿಗೂ
ವಿನಾಕಾರಣ ಸಿಟ್ಟಾಗುತ್ತೇನೆಂದು
ನೊಂದು ಅಗಲದಿರು ಗೆಳತಿ...
ಅಸಮಾಧಾನದ ಆತಂಕ
ಅಂತರಂಗವನ್ನೆಲ್ಲಾ ಕಲುಕಿದೆ
ಕನಿಕರಿಸಿ ಪ್ರೀತಿಯ ನದಿ
ಹರಿಸಿ ಬಿಡು....!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ