ಶನಿವಾರ, ಮೇ 23, 2015

ಸಖಿ ಗೀತೆ....193

ಸಖಿ...

ನೂರು ದೇವರ
ಪೂಜಿಸಿ
ಸಾವಿರ ಗುಡಿ
ಸುತ್ತಿದರೇನು?

ಅನ್ನ ದೇವರ
ಅಲಕ್ಷಿಸಿ
ಇಲ್ಲದ ದೇವರ
ಭಜಿಸಿದರೇನು?

ದೇವರಿಲ್ಲದೇ
ಬದುಕಬಹುದು
ಅನ್ನದೇವರಿಲ್ಲದೇ
ಇರಬಹುದೇನು?

ಅಗತ್ಯಮೀರಿ
ಅನ್ನ ಕೆಡಿಸುವವರ
ಯಾವ ದೇವನೂ
ಮೆಚ್ಚಲಾರನು....!!

ಅಹಮಿಕೆ ತೋರಿ
ಅನ್ನಕ್ಕವಮಾನ
ಮಾಡುವವನು
ಮನುಷ್ಯನೇನು....?

ಅನ್ನ ದೇವರ
ಮುಂದೆ ಇನ್ನು
ದೇವರಿಲ್ಲವೆಂಬ
ಸತ್ಯವ ಕಾಣು.....!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ