ಶನಿವಾರ, ಮೇ 23, 2015

ಸಖಿ ಗೀತೆ... 173

ಸಖಿ..

ಈ ಜಗದಲಿ
ಕ್ರಿಯಾಶೀಲ
ಹುಚ್ಚರು ಇಲ್ಲವೇ
ಕ್ರಿಯೇಟಿವ್
ಮಕ್ಕಳು ಮಾತ್ರ
ತಮ್ಮದೇ ಲೋಕದಲ್ಲಿ
ಸುಖವಾಗಿರಲು ಸಾಧ್ಯ....!

ಏನಾದರು ಸಾಧಿಸಲು
ಮೊದಲು ಹುಚ್ಚುತನ
ಬೆಳೆಸಿಕೊಳ್ಳಬೇಕು,
ಸಾಧನೆಯ ಹಾದಿಯಲ್ಲಿ
ಮಗುವಿನ ಕುತೂಹಲ
ಉಳಿಸಿಕೊಂಡಿರಬೇಕು

ಆಗ ಮಾತ್ರ
ಬದುಕಿಗೊಂದು ಅರ್ಥ
ಇಲ್ಲವಾದರೆ
ಜೀವನವೇ ವ್ಯರ್ಥ.....!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ