ಶನಿವಾರ, ಮೇ 23, 2015

ಸಖಿ ಗೀತೆ.... 175

ಸಖಿ..

ಅಂದು ಅಲ್ಲಿ
ಆ ಅವಳು
ನಾಚಿಗೆ ಬಿಟ್ಟು
ನಾಚುತ್ತಲೇ
ಕೇಳಿದಳು
'ನನ್ನನ್ನ
ಪ್ರೀತಿಸ್ತಿಯಾ..?'

ಬರಸೆಳದಪ್ಪಿ
ಹಣೆಗೆ ಮುತ್ತಿಕ್ಕಿ
ಸಮ್ಮತಿಸುವ
ಸಮಯದಲ್ಲಿನ್ನೊಂದು
ಪ್ರಶ್ನೆ ಎಸೆದಳು
'ನನ್ನೊಬ್ಭಳನ್ನು ಮಾತ್ರ
ಪ್ರೀತಿಸ್ತೀಯಾ..?'

ಆಲಿಂಗನ ಸಡಿಲಿಸಿ
ಮತ್ತೊಂದು ಮಾತಾಡದೇ
ಮುಖತಿರುಗಿಸಿ
ಮನೆಗೆ ಮರಳುವ ಮುನ್ನ
ಕಣ್ಣ ಮುಂದೆ ಸುಳಿದರು
ಅಪ್ಪ ಅವ್ವ, ತಮ್ಮ ತಂಗಿ
ಅಣ್ಣ ಅಕ್ಕಂದಿರು......!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ