ಶನಿವಾರ, ಮೇ 23, 2015

ಸಖಿ ಗೀತೆ...154

ಸಖಿ...

ಜಗವೆಲ್ಲಾ
ಎದ್ದಿರಲು
ನಿನಗೆಂಥಾ 
ನಿದ್ದೆ..?

ಸುಮ್ಮನಿರು
ಸಖಾ ನನ್ನ
ಕನಸಿನಲಿ
ನೀನೇ ಇದ್ದೆ...

ಅವೇಳೆಯಲಿ
ಅದೆಂತಾ ಕನಸು
ಎದ್ದೇಳಬಾರದೇ
ಸಖಿ....

ಯಾರವಳು ನನ್ನ
ಕನಸಿನಲಿ ನಿನ್ನ
ಜೊತೆ ಇದ್ದವಳು
ಹೇಳು ಸಖಾ...

ಏಳಬೇಡ
ಹಾಗೇ ಮಲಗಿ
ಹುಡುಕುತ್ತಲಿರು
ಇಲ್ಲದ ಸವತಿಯರ

ಇನ್ನೆಲ್ಲಿ ನಿದ್ದೆ
ಇಗೋ ನಾನೆದ್ದೆ
ತಿಳಿಯಬೇಕಿದೆ
ಆ ಅವಳ ವಿವರ...!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ