ಮಳೆ ಲೀಲೆ :
ಬೆಳ್ಳಂಬೆಳಿಗ್ಗೆ
ಬೆಂಗಳೂರಿಗೆ ಬಂದ
ಮಳೆಯೇ ಏನು ನಿನ್ನ ಲೀಲೆ...
ಬೆಂಗಳೂರಿಗೆ ಬಂದ
ಮಳೆಯೇ ಏನು ನಿನ್ನ ಲೀಲೆ...
ನೀ ಬಂದಾಗೆಲ್ಲಾ
ಹಲವಾರು ನೆನಪುಗಳ
ಹೊತ್ತು ತರುವೆ....
ಹಲವಾರು ನೆನಪುಗಳ
ಹೊತ್ತು ತರುವೆ....
ಕಾಯ್ದಾಗ ಬರದೇ
ಕೆಲಸವಿದ್ದಾಗ ಬಂದೆರಗುವ
ಸಖಿಯಂತೆ...
ಕೆಲಸವಿದ್ದಾಗ ಬಂದೆರಗುವ
ಸಖಿಯಂತೆ...
ಜಾರಿ ಬಿದ್ದಾಗ ಸಿಗದೇ
ಹುಷಾರಿದ್ದಾಗ ಬರುವ
ವೈದ್ಯ ಗೆಳೆಯನಂತೆ..
ಹುಷಾರಿದ್ದಾಗ ಬರುವ
ವೈದ್ಯ ಗೆಳೆಯನಂತೆ..
ಬಿಡುವಿದ್ದಾಗ ದೂರಾಗಿ
ತುರ್ತು ಕೆಲಸಕ್ಕೆ ಹೋಗುವಾಗ
ಮನೆಗೆ ಬರುವ ನೆಂಟನಂತೆ...
ತುರ್ತು ಕೆಲಸಕ್ಕೆ ಹೋಗುವಾಗ
ಮನೆಗೆ ಬರುವ ನೆಂಟನಂತೆ...
ಹಿಂಸೆ ದ್ವಂಸಗಳಾದಾಗ
ಕಾಣದೇ ಎಲ್ಲ ಮುಗಿದಾದ ಮೇಲೆ
ಬರುವ ಪೊಲೀಸರಂತೆ....
ಕಾಣದೇ ಎಲ್ಲ ಮುಗಿದಾದ ಮೇಲೆ
ಬರುವ ಪೊಲೀಸರಂತೆ....
ಸಕಾಲ ಬಿಟ್ಟು ಅಕಾಲದಲ್ಲಿ
ಬಂದೆಯಲ್ಲಾ ಮಳೆಯೆ
ಬಾ ಸುರಿಸು ಮುತ್ತಿನ ಹನಿಗಳ ಮಾಲೆ...
ಬಂದೆಯಲ್ಲಾ ಮಳೆಯೆ
ಬಾ ಸುರಿಸು ಮುತ್ತಿನ ಹನಿಗಳ ಮಾಲೆ...
ಮಳೆಯೇ ನೀ ಬಂದಾಗಲೆಲ್ಲಾ
ಹಲವರಿಗೆ ಹಿತ
ಕೆಲವರಿಗೆ ಆಘಾತ !
ಹಲವರಿಗೆ ಹಿತ
ಕೆಲವರಿಗೆ ಆಘಾತ !
ಬಂದವರನ್ನು ಹೋಗೆನ್ನಲಾಗದು
ತೊಂದರೆಯಾದರೂ ಹೊಂದಾಣಿಕೆ ಇದೆ
ಬಾ ಮಳೆಯೇ ನಿನಗೆ ಸ್ವಾಗತ...
ತೊಂದರೆಯಾದರೂ ಹೊಂದಾಣಿಕೆ ಇದೆ
ಬಾ ಮಳೆಯೇ ನಿನಗೆ ಸ್ವಾಗತ...
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ