ಗುರುವಾರ, ಮೇ 21, 2015

ಸಖಿ ಗೀತೆ.....115

ಸಖಿ....

ನನ್ನ ಕವಿತೆ ಖಂಡಿತ
ಪಂಡಿತರಿಗಲ್ಲ
ಪಾಮರರಿಗೆ...

ವ್ಯರ್ಥವಾಗಿ 
ಒಳಾರ್ಥಗಳ
ಹುಡುಕಲೇಬೇಡಿ...

ಅಲ್ಲಿ ವರ್ತಮಾನದ
ನಗಣ್ಯ
ತಲ್ಲಣಗಳಿವೆ...

ಪಾಂಡಿತ್ಯಪೂರ್ಣ
ಮಾನದಂಡಗಳಿಗಿಲ್ಲಿ
ಕೆಲಸವೆಲ್ಲಿ?

ನನ್ನ ಕವನಗಳು
ಬೆತ್ತಲಾಗುವ ಮುಂಚೆ
ಬಿಚ್ಚಿಕೊಳ್ಳುತ್ತವೆ..

ಓದಿದರೆಕ್ಷಣ ಆಪ್ತವಾಗಿ
ಮರುಕ್ಷಣ
ಮರೆತು ಬಿಡುತ್ತವೆ..

ಇಲ್ಲಿ ಸ್ಮೃತಿ ಇಲ್ಲ
ಕಾವ್ಯ ಶೃತಿ ಇಲ್ಲ
ಇವು ಕವಿತೆಗಳೇ ಅಲ್ಲ...

ಆದರೂ ಕ್ಷಣಕಾಲ
ಕಾಡುತ್ತವೆ ಇನ್ನೇನೋ
ಹೇಳುತ್ತವೆ..

ಕಾವ್ಯವಲ್ಲದ ಕವನಗಳಿವು
ಓದುಗರ ಚಿತ್ತ ಭಿತ್ತಿಯಲ್ಲಿ
ಸ್ಥಾವರವಾಗದೇ ಜಂಗಮಿಸುತ್ತವೆ....

-ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ