ಗುರುವಾರ, ಮೇ 21, 2015

ಹೌದು ಮಹಾಕವಿಗಳೇ

ಹೌದು ಮಹಾಕವಿಗಳೇ
ನನ್ನ ಕವಿತೆಗಳಿಗೆ
ಆಳ ಅಗಲ ಕಮ್ಮಿ...

ತುಂಬಾ ಹಗುರ
ಜಗದಗಲ 
ಹಾರಾಡುತ್ತವೆ.....

ಕಾವ್ಯದ ಗಂಧಗಾಳಿ
ಅರಿಯದ ಪಾಮರರಿಗೂ
ಅರ್ಥವಾಗುತ್ತವೆ..

ನಿಮ್ಮದು ಬಿಡಿ
ಪ್ರಖ್ಯಾತ ಪಂಡಿತ
ಶ್ರೇಷ್ಠ ಕಾವ್ಯಗಳು,

ತೂಕದ ಕಾವ್ಯ ನಿಮ್ಮದು
ಅವುಗಳ ಆಳಅಗಲ
ಅಳೆಯಲು ಪಂಡಿತರೇ ಬೇಕು...

ಇತಿಹಾಸದ ಶೋಕೇಸಿನಲ್ಲಿ
ಪದಕ ಪ್ರಶಸ್ತಿಗಳ ಸಮೇತ
ಅಲಂಕೃತವಾಗಿರುತ್ತವೆ.

-ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ