ಗುರುವಾರ, ಮೇ 21, 2015

ಸಖಿ ಗೀತೆ....114

ಸಖಿ....

ಇಷ್ಟಾ ಪಡೋದು
ಪ್ರೀತಿ ಮಾಡೋದು
ಎರಡೂ ಒಂದೇ 
ಅನ್ನೋದೆಲ್ಲಾ ಸುಳ್ಳು.

ಸುಂದರ ಹೂವೊಂದು
ಇಷ್ಟವಾದರೆ ಕಿತ್ತಕೋಬಹುದು

ಆದರೆ....

ಹೂಮೇಲೆ ಪ್ರೀತಿಯಾದರೆ
ನೀರುಣಿಸಿ ಬೆಳೆಸಬಹುದು.

ಅದಕ್ಕೆ...

ಇಷ್ಟ ಪಟ್ಟಿದ್ದನ್ನ ಪ್ರೀತ್ಸಿ
ಪ್ರೀತ್ಸಿದ್ದನ್ನ ಉಳಿಸಿ
ಉಳಿಸಿದ್ದನ್ನ ಬೆಳೆಸಿ
ಬೆಳೆಸಿದ್ದನ್ನ ಗಳಿಸಿ
ಗಳಿಸಿದ್ದನ್ನ ಮತ್ತೆ ಪ್ರೀತ್ಸಿ.....

-ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ