ಕಾಲಾಯ ತಸ್ಮೈ ನಮೋ ನಮಃ :
ಅಧೋಲೋಕದಂತರಾಳದೊಳಗೆ
ಹಿಂಸೆಯ ಹುಳುಗಳ ಬೀಜ
ಅಗಣಿತ ಅಟ್ಟಹಾಸ ದ್ವಂಸ
ಹಾಲಾಹಲದೆರಕದಲಿ ಕಂಸ....
ಹಿಂಸೆಯ ಹುಳುಗಳ ಬೀಜ
ಅಗಣಿತ ಅಟ್ಟಹಾಸ ದ್ವಂಸ
ಹಾಲಾಹಲದೆರಕದಲಿ ಕಂಸ....
ಅಂಕೆ ಶಂಕೆಗಳ ಮೀರಿ ಶಂಖನಾದ
ಅವತಾರದ ಸೊಲ್ಲಿಲ್ಲ - ಕಾರಿರುಳು
ಹೊತ್ತಿಸಿದ ಧಗೆ ಧಗಧಗ....
ಬೆಚ್ಚಿ ಬಿದ್ದಿತು ಧರಣಿ.
ಅವತಾರದ ಸೊಲ್ಲಿಲ್ಲ - ಕಾರಿರುಳು
ಹೊತ್ತಿಸಿದ ಧಗೆ ಧಗಧಗ....
ಬೆಚ್ಚಿ ಬಿದ್ದಿತು ಧರಣಿ.
ತಳಮಳಮೀರಿ ಬೆಳೆದ ತಲ್ಲಣ
ಆಳಅಗಲವರಿಯದ ರೋಧನ
ವೃಣಪೀಡಿತ ವಸುಂಧರೆಗೆ ವಜ್ರಾಘಾತ
ಗಾವಿಲ ಗಾರುಡಿಗನ ಸದ್ದಿಲ್ಲ.
ಆಳಅಗಲವರಿಯದ ರೋಧನ
ವೃಣಪೀಡಿತ ವಸುಂಧರೆಗೆ ವಜ್ರಾಘಾತ
ಗಾವಿಲ ಗಾರುಡಿಗನ ಸದ್ದಿಲ್ಲ.
ನರನರನೆದೆಯೊಳಗೆ ತುಡಿತ ಮಿಡಿತ
ಇಲ್ಲ ಕನಿಕರ, ಎಲ್ಲ ಮತ್ಸರದ ಮಾಯೆ
ಬೆಳೆಕೆಂಬುದು ಬೆಳಕಲ್ಲ ಕಡಲಾಳದ ಭೋರ್ಗರೆತ
ಜಗಕೆ ಜ್ವರ ತಾಪ ಪರಿತಾಪ ಯಾರದೀ ಶಾಪ...
ಇಲ್ಲ ಕನಿಕರ, ಎಲ್ಲ ಮತ್ಸರದ ಮಾಯೆ
ಬೆಳೆಕೆಂಬುದು ಬೆಳಕಲ್ಲ ಕಡಲಾಳದ ಭೋರ್ಗರೆತ
ಜಗಕೆ ಜ್ವರ ತಾಪ ಪರಿತಾಪ ಯಾರದೀ ಶಾಪ...
ಸಂಭವಾಮಿ ಸಂಭವವೆಲ್ಲಿ ಯುಗದವತಾರ
ಸಾವಿಲ್ಲದ ರೂವಿಲ್ಲದವನ ಹುಟ್ಟೆಲ್ಲಿ
ಅವತಾರ ಸೃಷ್ಟಿಸುವ ಊಹಾಲೋಕದ ಪಂಡಿತರೆಲ್ಲಿ
ಬಾರದು ಬಪ್ಪುದು, ಬಪ್ಪುದು ಬಾರದು ಕಾಲಾಯ ತಸ್ಮೈ ನಮೋ ನಮಃ !!!
ಸಾವಿಲ್ಲದ ರೂವಿಲ್ಲದವನ ಹುಟ್ಟೆಲ್ಲಿ
ಅವತಾರ ಸೃಷ್ಟಿಸುವ ಊಹಾಲೋಕದ ಪಂಡಿತರೆಲ್ಲಿ
ಬಾರದು ಬಪ್ಪುದು, ಬಪ್ಪುದು ಬಾರದು ಕಾಲಾಯ ತಸ್ಮೈ ನಮೋ ನಮಃ !!!
-ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ