ಗುರುವಾರ, ಮೇ 21, 2015

ಸಖಿ ಗೀತೆ....113

ಸಖಿ..

ಅಸ್ತ್ರಗಳು
ಈ ದೇಶದಲ್ಲಿ
ಮಾಡಿದ ಹಿಂಸಾಪಾತಕ್ಕಿಂತ...

ಶಸ್ತ್ರಗಳು
ಮನುಕುಲದಲ್ಲಿ
ಹುಟ್ಟಿಸಿದ ಕ್ರೌರ್ಯಕ್ಕಿಂತ...

ಶಾಸ್ತ್ರಗಳು ತಣ್ಣಗೆ
ಅದೆಷ್ಟೋ ಪಟ್ಟು ಹೆಚ್ಚು
ಹಿಂಸೆ, ಕ್ರೌರ್ಯ ಸೃಷ್ಟಿಸಿವೆ.

ಶಾಸ್ತ್ರಗಳೆಲ್ಲಾ ನಾಶವಾಗಿ
ಸಮಾನತೆ ಸುಗಮಗೊಂಡಾಗ
ಅಸ್ತ್ರ ಶಸ್ತ್ರಗಳ ವಿನಾಶ..
ಅಲ್ಲಿವರೆಗೂ ಹೀಗೇನೆ ಈ ದೇಶ......

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ