ಗುರುವಾರ, ಮೇ 21, 2015

ಸಖಿ ಗೀತೆ....112

ಸಖಿ...

ನಮ್ಮ ಬದುಕೆ ಹೀಗೆ
ಆಗಸದ ಚಂದಿರನ ಹಾಗೆ.

ಬದುಕೆಂದರೆ...
ನೋವು ನಲಿವು
ಸಂತಸ ಸಂಕಟಗಳ
ಪುನರಾವರ್ತನೆ.

ಚಂದಿರನದೋ...
ಪೌರ್ಣಮಿ ಅಮವಾಸ್ಯೆ
ಕತ್ತಲು ಬೆಳಕಿನ
ಆವರ್ತನೆ.

ಚಂದಿರನಿಂದ ಬದುಕಿನ
ಪಾಠ ಕಲಿಯಲೇಬೇಕು,
ಸುಖ ದುಃಖಗಳೆಲ್ಲವ
ಸಮಚಿತ್ತದಿ ಅನುಭವಿಸಲೇಬೇಕು.

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ