ಮತ್ತೊಂದು ಹೊಸ ವರ್ಷ :
ಕಟ್ಟರ್ ಹಿಂದೂವಾದಿಗಳು ಹೇಳ್ತಾರೆ
ಕ್ರಿಶ್ಚಿಯನ್ ಕ್ಯಾಲೆಂಡರಿನ ಹೊಸವರ್ಷ ನಮ್ಮದಲ್ಲ
ಹಿಂದೂ ರಾಷ್ಟ್ರದಲ್ಲಿ ವಿದೇಶಿ ಆಚರಣೆ ಬೇಕಾಗಿಲ್ಲ.
ಕ್ರಿಶ್ಚಿಯನ್ ಕ್ಯಾಲೆಂಡರಿನ ಹೊಸವರ್ಷ ನಮ್ಮದಲ್ಲ
ಹಿಂದೂ ರಾಷ್ಟ್ರದಲ್ಲಿ ವಿದೇಶಿ ಆಚರಣೆ ಬೇಕಾಗಿಲ್ಲ.
ಮತಾಂಧ ಆತಂಕವಾದಿಗಳಂತಾರೆ
ಭಾರತದಲ್ಲಿ ಸಂಭ್ರಮಾಚರಣೆಗಳೇ ಬೇಕಾಗಿಲ್ಲ
ಬಾಂಬಿಟ್ಟು ರಕ್ತಪಾತ ಮಾಡುವುದು ಬಿಟ್ಟು ನಮಗೇನೂ ಗೊತ್ತಿಲ್ಲ.
ಭಾರತದಲ್ಲಿ ಸಂಭ್ರಮಾಚರಣೆಗಳೇ ಬೇಕಾಗಿಲ್ಲ
ಬಾಂಬಿಟ್ಟು ರಕ್ತಪಾತ ಮಾಡುವುದು ಬಿಟ್ಟು ನಮಗೇನೂ ಗೊತ್ತಿಲ್ಲ.
ಯಾರು ಏನೇ ಹೇಳಲಿ, ಏನೆ ಮಾಡಲಿ
ಹಿಂಸೆ ಹತಾಷೆ ಜನದಗಲ ಹಬ್ಬಿರಲಿ
ಹುಸಿ ಭ್ರಮೆಯಲ್ಲಿ ಜನ ಸಂಭ್ರಮಿಸುತ್ತಿರಲಿ.
ಹಿಂಸೆ ಹತಾಷೆ ಜನದಗಲ ಹಬ್ಬಿರಲಿ
ಹುಸಿ ಭ್ರಮೆಯಲ್ಲಿ ಜನ ಸಂಭ್ರಮಿಸುತ್ತಿರಲಿ.
ಸರಕು ಮಾರುವ ಬಂಡವಾಳಿಗರು
ಅವರೇ ನಡೆಸುವ ಸಕಲೆಂಟು ಮಾಧ್ಯಮಗಳು
ಸಂಭ್ರಮದಿಂದ ಹೇಳುತ್ತವೆ ಚಿಯರ್ಸ್ ಚಿಯರ್ಸ್
ಅವರೇ ನಡೆಸುವ ಸಕಲೆಂಟು ಮಾಧ್ಯಮಗಳು
ಸಂಭ್ರಮದಿಂದ ಹೇಳುತ್ತವೆ ಚಿಯರ್ಸ್ ಚಿಯರ್ಸ್
ಜನರು ಒಬ್ಬರಿಗೊಬ್ಬರು ಹೇಳ್ತಾನೆ ಇದ್ದಾರೆ ಹ್ಯಾಪಿ ನ್ಯೂ ಇಯರ್ !!!!!
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ