ಸೋಮವಾರ, ಮೇ 18, 2015

ಸಖಿ ಗೀತೆ... 38

ಸಖಿ.....

ಬಾರೆ ಸಖಿ 
ಸಂಭ್ರಮಿಸೋಣ
ಹೊಸ ವರುಷ ಬಂದಿದೆ.

ಹಳತು ಮರೆತು
ಹೊಸತು ಬೆರೆತು
ಕುಣಿಯೋಣ ಎಂದಿದೆ.....

ಬೇಡ ಸಖ 
ಸಂಭ್ರಮ
ಆತಂಕ ತಂದಿದೆ....

ಹಳೆಯ ನಿರಾಸೆ
ಹೊಸ ನಿರೀಕ್ಷೆ
ನೆಮ್ಮದಿಯ ಕೊಂದಿದೆ....

-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ