ಮುದ್ದು ನಾಯಿ ಮರಿ :
ಪ್ರೀತಿಯ ಕೊರತೆ ತುಂಬಿಕೊಳ್ಳಲು
ಮನೆಗೊಂದು ನಾಯಿಮರಿ ತಂದೆ.
ಯಾವ ಜನ್ಮದ ಮೈತ್ರಿಯೋ ಕಾಣೆ
ಮನಸೋತೆನದರ ಒಲವಿನ ಮುಂದೆ.
ಮನೆಗೊಂದು ನಾಯಿಮರಿ ತಂದೆ.
ಯಾವ ಜನ್ಮದ ಮೈತ್ರಿಯೋ ಕಾಣೆ
ಮನಸೋತೆನದರ ಒಲವಿನ ಮುಂದೆ.
ಮಡದಿ ಎನ್ನುವವಳೆಂದೂ ನನಗಾಗಿ ಕಾಯಲಿಲ್ಲ
ಸಮಾಧಾನವಿತ್ತು ನಾಯಿಮರಿ ನನಗಾಗಿ ಕಾಯುತ್ತಿತ್ತು.
ಕಾಡಲಿಲ್ಲ ಮರಿ ಏನೊಂದು ಬೇಡಲಿಲ್ಲ
ಸದಾ ಆಟವಾಡಲು ಹಾತೊರೆಯುತ್ತಿತ್ತು.
ಸಮಾಧಾನವಿತ್ತು ನಾಯಿಮರಿ ನನಗಾಗಿ ಕಾಯುತ್ತಿತ್ತು.
ಕಾಡಲಿಲ್ಲ ಮರಿ ಏನೊಂದು ಬೇಡಲಿಲ್ಲ
ಸದಾ ಆಟವಾಡಲು ಹಾತೊರೆಯುತ್ತಿತ್ತು.
ಮಾಯಗಾತಿ ಸದ್ದಿಲ್ಲದೇ ಮರಿ ಮಾಯಮಾಡಿಬಿಟ್ಟಳು
ನಾನೊಂದು ಬಗೆದರೆ ಅಸೂಯೆಗೆ ಹನ್ನೊಂದು ಬಗೆ.
ಎಲ್ಲಿಯೋ ಓಡಿಹೋಯಿತೆಂದು ರೀಲು ಬಿಟ್ಟಳು.
ಕೊನೆಗೂ ಹೆಂಡತಿ ಸಾಧಿಸಿಯೇ ಬಿಟ್ಟಳು ಹಗೆ.
ನಾನೊಂದು ಬಗೆದರೆ ಅಸೂಯೆಗೆ ಹನ್ನೊಂದು ಬಗೆ.
ಎಲ್ಲಿಯೋ ಓಡಿಹೋಯಿತೆಂದು ರೀಲು ಬಿಟ್ಟಳು.
ಕೊನೆಗೂ ಹೆಂಡತಿ ಸಾಧಿಸಿಯೇ ಬಿಟ್ಟಳು ಹಗೆ.
ಎಲ್ಲಿರುವೆ ನನ್ನ ಮುದ್ದು ಮರಿ
ಪ್ರತಿದಿನ ಕಾಯುತಿರುವೆ ನಿನ್ನದೇ ದಾರಿ
ಸಾಕೆನಗೆ ಸ್ವಾರ್ಥಿಗಳ ಸಹವಾಸ
ಮರಳಿ ಬಂದರೆ ನಾನಿನ್ನ ದಾಸಾನುದಾಸ..
ಪ್ರತಿದಿನ ಕಾಯುತಿರುವೆ ನಿನ್ನದೇ ದಾರಿ
ಸಾಕೆನಗೆ ಸ್ವಾರ್ಥಿಗಳ ಸಹವಾಸ
ಮರಳಿ ಬಂದರೆ ನಾನಿನ್ನ ದಾಸಾನುದಾಸ..
-ಶಶಿಕಾಂತ ಯಡಹಳ್ಳಿ..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ