ಸೋಮವಾರ, ಮೇ 18, 2015

ಸ್ಥಿತ್ಯಂತರ :

ಸ್ಥಿತ್ಯಂತರ :

ಭಾವಲೋಕದಲ್ಲಿ ಒಳಸುಳಿಗಳ ಹಿಂಡು
ಆಳಕ್ಕಿಳಿದಷ್ಟೂ ಎಳತ ಸೆಳೆತಗಳ ಮಾಯೆ
ವಾಸ್ತವವಾದರೆ ಬೆಂಡು ಅತಿಭಾವುಕತೆ ಗುಂಡು
ಆಳಕ್ಕಿಳಿದು ಮೇಲೆಳದವರ ಕಾಪಾಡು ತಾಯೆ.. ಮಹಾಮಾಯೆ !
* * * * *
ನಡೆದಷ್ಟೂ ಅಂತಿಮ ಗಡಿ ದೂರ
ಕೂತಷ್ಟೂ ಗಡಿಯೇ ಬರುವುದು ಹತ್ತಿರ
ನಿರಂತರ ಕ್ರಿಯಾಶೀಲತೆ ದೀರ್ಘಾಯುಷ್ಯದ ಸತ್ವಸಾರ
ಸಾವಿನ ಗಡಿ ಹುಡುಕಿ ಬಂದಾಗ ಎಲ್ಲರೂ ನಿರುತ್ತರ.
* * * * *
ಇದು ಮಹಾನಗರದ ಟ್ರಾಫಿಕ್ಕು ಮಾರಾಯಾ
ಅವಸರ ಮಾಡಿದ್ರೆ ಓಂ ನಮಃ ಶಿವಾಯ !
ನಿಂತು ನೋಡಿ ನಡೆದರೆ ದಾರಿ ಸುಗಮ
ಒಂಚೂರು ಯಾಮಾರಿದರೆ ಸಾವಿನ ಸಮಾಗಮ!!
* * * * *
ಬದುಕೇ ಹೀಗೆ ಹರಿಯುವ ನದಿಯ ಹಾಗೆ
ಅಡೆತಡೆಗಳ ದಾಟಿ ದಾರಿ ಹುಡುಕಿ ಚಲಿಸಬೇಕು ನಿರಂತರ
ನಿಂತಾಗ ಚಲನ, ಜೀವಜಲದ ಮರಣ
ಕಷ್ಟನಷ್ಟಗಳೇನೇ ಇರಲಿ ಬದುಕು ಸದಾ ಸಾಗುತಲಿರಲಿ.

-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ