ಗುರುವಾರ, ಮೇ 21, 2015

ಹತಭಾಗ್ಯ ತಂದೆಯ ತಲ್ಲಣ :

ಹತಭಾಗ್ಯ ತಂದೆಯ ತಲ್ಲಣ :

ನನ್ನೆದೆಗೆ ಚೂರಿ ಹಾಕಿದ್ದು
ನನ್ನವರೇ ಹೊರತು....
ಬೇರೆಯವರಿಗೆಲ್ಲಿತ್ತು
ಮನಸೊಡೆಯುವ ತಾಕತ್ತು.
ಹೊರಗಿನವರ ಸಂಚಿಗೆ
ಬಲಿಯಾಯ್ತು ನಿಯತ್ತು !

ಅದಕ್ಕೆ ಹೇಳುವುದು
ಜೊತೆಯಲ್ಲೇ ಇರ್ತಾರೆ
ನಂಬಿಕೆದ್ರೋಹಿಗಳು, ವಂಚಕರು
ಹೊತ್ತು ನೋಡಿ ಕತ್ತು ಕೊಯ್ತಾರೆ !!

ನಂಬಿದವರೇ ವಂಚಕರಾದರೆ
ಯಾರನ್ನ ನಂಬುವುದು?
ಕರುಳಬಳ್ಳಿ ಕತ್ತಿಗೆ ಕುಣಿಕೆಯಾದರೆ
ಯಾರಿಗಾಗಿ ಬದುಕುವುದು?

ಹೊರಗಿನವರಾದರೆ ಶತ್ರು
ದಿಟ್ಟವಾಗಿ ಎದುರಿಸಬಹುದು..
ಕರುಳಕುಡಿ ಎದುರಾಳಿಯಾದರೆ
ಯಾರಿಗಾಗಿ ಕಾದಾಡುವುದು ?

ಯುದ್ಧ ಹೊರಗಿನದಲ್ಲ
ಮನದೊಳಗಿದೆ ತಲ್ಲಣ
ಅತಿಯಾದ ಮಮತೆಯೇ
ಇದಕ್ಕೆಲ್ಲಾ ಕಾರಣ.....!!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ