ಗುರುವಾರ, ಮೇ 21, 2015

ಸಖಿ ಗೀತೆ.....127

ಸಖಿ...

ಹುಡುಗರಿಗೊಂದಿದೆ ಚಟ
ಹುಡುಗೀರ ಪ್ರೀತಿ ಪರೀಕ್ಷಿಸುವ ಹಠ.

ಆತ ಆಗಾಗ ಕೇಳ್ತಾನೆ ಇದ್ದ
'ಎಷ್ಟೊಂದು ಪ್ರೀತಿಸ್ತಿಯಾ ಚಿನ್ನಾ' .
ಆತ ಉತ್ತರಕ್ಕಾಗಿ ಕಾಯುತ್ತಿದ್ದ
ಆಕೆ ಕೆನ್ನೆ ತುಂಬಾ ಕೆಂಪು ಬಣ್ಣ.

'ನಾ ಫೋನಾದರೆ ನೀ ಸಿಮ್ಮು ಕಣೋ
ಸಿಮ್ಮಿಲ್ಲದೆ ಪೋನ್ ಇರುತ್ತದೆನೋ?'
ಎಂದವಳ ರೂಪಕದ ಮಾತಿಗೆ ಕಳೆದೋದ
ಕೇಳಿದ್ದೆಲ್ಲಾ ಕೊಟ್ಟು ಬರಿದಾದ.

ಮುಂದೊಂದು ದಿನ
ಆಕೆಯನ್ನು ಮತ್ತೊಬ್ಬನ ಜೊತೆ
ನೋಡಿ ಕೇಳಿದ
'ಸಿಮ್ಮಿಲ್ಲದ ಪೊನೇ ಏನು ನಿನ್ನ ಕಥೆ'.

'ಅಯ್ಯೋ ಮಂಕೆ
ನಂದು ಡಬಲ್ ಸಿಮ್ಮು
ನೋಡಿಲ್ಲಿ ಸ್ಮಾರ್ಟಫೋನು
ಕಿಲಕಿಲ ನಕ್ಕಳಾಕೆ.

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ