ಗುರುವಾರ, ಮೇ 21, 2015

ಸಖಿ ಗೀತೆ.... 126

ಸಖಿ....

ಆಹಾ...!
ಹೆಂಗ್ರೀ ಬರೀತೀರಿ
ಕವಿತೇನಾ?
ಎಲ್ಲಾ ಸ್ವಂತ
ಅನುಭವನಾ?

ಎಂದೆಲ್ಲಾ
ಪ್ರಶ್ನಿಸುವ
ಸಖಿ....
ಕಿವಿಗೊಟ್ಟು ಕೇಳು

ಹೆರಿಗೆ ನೋವಾನುಭವಕ್ಕೆ
ಬಸಿರಾಗಲೇಬೇಕಿಲ್ಲ
ಸ್ವರ್ಗ ಸೇರುವಾಸೆಗೆ
ಸಾಯಲೇಬೇಕಿಲ್ಲ,

ನಂದು ನಿಂದು
ಅವಂದು ಇವಂದು
ಎಲ್ಲರನುಭವ ಸೇರಿ
ಒಟ್ಟು ಹಾಕಿ ಹೊಟ್ಟು ತೂರಿ
ಗಟ್ಟಿಕಾಳಾಗಿ ಹುಟ್ಟಿ-
ಬರುವುದು ಕವನ...

ಜಗದನುಭವ
ಜೀರ್ಣಿಸಿಕೊಂಡು
ಸ್ವಾನುಭವ
ದಕ್ಕಿಸಿಕೊಂಡು
ಒಕ್ಕನಿಸುವುದು
ಕವಿ ಬರಹ

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ