ಗುರುವಾರ, ಮೇ 21, 2015

ಸಖಿ ಗೀತೆ....125

ಸಖಿ...

ಹೀಗೆ ಬಾ
ಪರಿಚಯಿಸುತ್ತೇನೆ
ನನ್ನ ಆದರ್ಶ ಕುಟುಂಬ ...!

ಈಕೆ ನನ್ನ ಪತ್ನಿ
ಉಪನಾಮ 'ನಕಾರ'
ಮಾತುಮಾತಿಗಿವಳ ಧಿಕ್ಕಾರ...

ಈತ ಕುವರ
ಹೆಸರು 'ಓಂಕಾರ'
ಕಿರಿಕಿರಿಯಂತೂ ಧಾರಾಕಾರ...

ಇನ್ನು ನಾನೋ 'ಚಕಾರ'
ಶಬ್ದ ಕೂಡಾ ಎತ್ತಲಾಗದ
ಆದರ್ಶ ಪತಿ...

ಹೀಗಾಗಿ ನನ್ನದೊಂದು
ಬಲು ಅಪರೂಪದ
(ಅ)ಸುಖಿ ಕುಟುಂಬ..!!

ಆಗಾಗ ನಾಚಿಕೆಯಾಗುತ್ತದೆ
ಕನ್ನಡಿಯಲ್ಲಿ ನೋಡಿಕೊಂಡರೆ
ನನ್ನದೇ ಬಿಂಬ.......!!!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ