ಗುರುವಾರ, ಮೇ 21, 2015

ಸಖಿ ಗೀತೆ....124

ಸಖಿ...

ಕ್ಷಮಿಸಿಬಿಡು
ಆರೋಪಿಸಿದವರ
ಅನುಮಾನಿಸಿದವರ
ಅವಮಾನಿಸಿದವರ
ಹಾಗೂ
ಮಲ್ಲಿಗೆಯಂತಹ ನಿನ್ನ
ಮನಸು ನೋಯಿಸಿದವರ....

ಎಲ್ಲಕ್ಕಿಂತ ಮೊದಲು
ನಿನ್ನನ್ನು ನೀ ಕ್ಷಮಿಸಿಕೋ
ನಿನ್ನ ಮನದೊಳಗೆ
ಅಪಾತ್ರರಿಗೆ
ಜಾಗ ಕೊಟ್ಟಿದ್ದಕ್ಕೆ
ಒಳನುಸುಳಲು ಬಿಟ್ಟಿದ್ದಕ್ಕೆ...

ಮುನಿಸಿಕೊಳ್ಳದೇ
ಮನ್ನಿಸಿಕೋ..
ಗುಟ್ಟಿನ ಮಾತೊಂದ
ಹೇಳುವೆ ತಿಳಿದುಕೋ....
ಅತೀ ನಿರೀಕ್ಷೆಯಿದ್ದಲ್ಲಿ
ನಿರಾಶೆಯಿದೆ,,,
ದುರಾಸೆ ಇದ್ದಲ್ಲಿ
ನೆಮ್ಮದಿ ನಾಶವಿದೆ.

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ