ಗುರುವಾರ, ಮೇ 21, 2015

ಸಖಿ ಗೀತೆ ....123

ಸಖಿ...

ಕಾಲ ಬದಲಾಗಿದೆ
ಬದಲಾಗುತ್ತಿದೆ
ಬದಲಾಗುತ್ತಲೇ ಇರುತ್ತದೆ...

ಹಿಂದಿನ ಹಾಗೆ
ಮದುವೆ ಬಂಧನ
ಗಂಡು ಹೆಣ್ಣುಗಳ
ಕಟ್ಟಿ ಹಾಕುತ್ತಿಲ್ಲ...

ಚೆಂದದ ಕಂದನ
ಸುಂದರ ನಗುವೂ
ಬಿರುಕು ಬಿಟ್ಟ
ದಾಂಪತ್ಯ ಜೋಡಿಸುತ್ತಿಲ್ಲ...

ಬಂಧ ಸಂಬಂಧಗಳಾಚೆ
ಬದುಕು ಜಾರುತ್ತಿದೆ
ಇರುವುದೆಲ್ಲವ ಬಿಟ್ಟು
ಇರದುದರತ್ತ ಮನವು ತುಡಿಯುತ್ತಿದೆ....!

-ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ