ಮಂಗಳವಾರ, ಮೇ 19, 2015

ಸಖಿ ಗೀತೆ....98

ಸಖಿ.....

ನಿಜಕ್ಕೂ ಗೊತ್ತಾಗುತ್ತಿಲ್ಲ
ನಾನೇ ಹೀಗೇನಾ
ಎಲ್ಲಾ ಗಂಡಂದಿರೂನಾ?

ನನ್ನಾಕೆ ಅಪರೂಪಕ್ಕೊಮ್ಮೆ
ನನ್ನ ಪ್ರೀತಿಸ್ತೀನೆ ಎಂದಾಗೆಲ್ಲಾ
'
ನಾನೂ ಕೂಡಾ' ಎನ್ನುತ್ತೇನೆ.
' ದ್ವೇಷಿಸ್ತೇನೆ' ಎಂದಾಗಲೂ
'
ಪರವಾಗಿಲ್ಲ ಬಿಡು' ಎಂದು
ಮುದ್ದಾಡಿದ್ದೇನೆ..

ಆದರೆ ನನಗೆ ಗೊತ್ತಾಗುತ್ತಿಲ್ಲ
ನನ್ನವಳು ಮಾತ್ರ ಹೀಗೇನಾ
ಎಲ್ಲಾ ಹೆಂಡಂದಿರೂನಾ?

'ನಿನ್ನ ತುಂಬಾ ಪ್ರೀತಿಸ್ತೀನಿ' ರಾಣಿ
ಎಂದರೆ 'ನಿಜವಾಗಲೂನಾ?'
ಎಂದು ಅನುಮಾನಿಸುತ್ತಾಳೆ.

'ಇಲ್ಲಾ ದ್ವೇಷಿಸ್ತೇನೆ' ಎಂದರೆ
'
ನನಗೆ ಗೊತ್ತಿತ್ತು' ಎಂದು
ಮುನಿಸಿಕೊಳ್ಳುತ್ತಾಳೆ.

ಇಂತಾ ಅನುಭವ ಆಗಿದ್ದು
ನನಗೊಬ್ಬನಿಗೇನಾ 
ಇಲ್ಲಾ ನಿಮಗೂನಾ?

ಸರಿಯಾಗಿ
ಉತ್ತರಿಸೋರಿಗಿದೆ
ಬಹುಮಾನ.

-ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ