ಮಂಗಳವಾರ, ಮೇ 19, 2015

ಸಖಿ ಗೀತೆ....95

ಸಖಿ....

ಯಾರಿಗೆ ಬಂತು
ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ....

ದಲಿತ ಕವಿಯ
ಬಾಳಿಗೆ ಬಂತು..
ರಾಜೀಕೋರನ
ಜೇಬಿಗೆ ಬಂತು...!

ನಂಬಿಕೆಚೋರನ
ತಿಜೋರಿಗೆ ಬಂತು...
ಸಮಯಸಾಧಕನ
ಸಮಯಕೆ ಬಂತು...

ಅವಕಾಶವಾದಿಯ
ಅನುಕೂಲಕೆ ಬಂತು...
ನಲವತ್ತೇಳರ ಸ್ವಾತಂತ್ರ್ಯ...!!

ಉಳ್ಳವರ ಎಕ್ಕಡ ನೆಕ್ಕುವ
ನಾಲಿಗೆಗೆ ಬಂತು...
ಹುಸಿಬಂಡಾಯಕೋರರ
ಬಾಯಿಗೆ ಬಂತು...

ಹೊಗಳು ಬಟ್ಟಂಗಿಯ
ಬಹುಪರಾಕಿಗೆ ಬಂತು...
ನಲವತ್ತೇಳರ ಸ್ವಾತಂತ್ರ್ಯ..
ನಲವತ್ತೇಳರ ಸ್ವಾತಂತ್ರ್ಯ...!!!

-ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ