ಮಂಗಳವಾರ, ಮೇ 19, 2015

ಸಖಿ ಗೀತೆ.....94

ಸಖಿ....

ಅಂತೂ ಇಂತೂ 
ಮುಗೀತು ಮೂರು ದಿನದ
ಸಾಹಿತ್ಯ ಸಂತೆ....

ಮೆರವಣಿಗೆ
ಉರುವಣಿಗೆ
ಸನ್ಮಾನಗಳ ಅಬ್ಬರ...

ಆಶ್ವಾಸನೆಗಳಿಗೇನು 
ಕೊರತೆ ಬಗೆದಷ್ಟೂ
ಮಾತಿನ ಒರತೆ...!

ಎಲ್ಲಿ ನೋಡಿದರಲ್ಲಿ
ಕನ್ನಡದ ಮೋಡಿ.
ಇವರ ಮಕ್ಕಳೆಲ್ಲಾ
ಯಾವ ಭಾಷೆಯಲ್ಲಿ
ಶಾಲೆ ಕಲಿತಿದ್ದಾರೆ
ಒಮ್ಮೆ ಹೋಗಿ ನೋಡಿ...!!

ನಾಳೆಯಿಂದ ದಿವ್ಯ ಮೌನ
ಮುಂದಿನ ಜಾತ್ರೆಗೆ ಮತ್ತೆ
ನಿರ್ಣಯಗಳ ಋತುಗಾನ.....!!!

-ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ