ಸಖೀ...
ನನ್ನ ಬದುಕಿನ
ಪುಸ್ತಕದ
ಮೊದಲ ಪುಟ
ಬರೆಯಲಂತೂ
ಅವಕಾಶವೇ ಇರಲಿಲ್ಲ.
ಮೊದಲ ಪುಟ
ಬರೆಯಲಂತೂ
ಅವಕಾಶವೇ ಇರಲಿಲ್ಲ.
ಕೊನೆಯ ಪುಟದ
ಅಂತಿಮ ಅಧ್ಯಾಯದ
ವಿವರಗಳಂತೂ
ಗೊತ್ತಾಗುವುದೇ ಇಲ್ಲ.
ಅಂತಿಮ ಅಧ್ಯಾಯದ
ವಿವರಗಳಂತೂ
ಗೊತ್ತಾಗುವುದೇ ಇಲ್ಲ.
ಬಾಲ್ಯದ
ಪುಟಗಳನು
ಹೆತ್ತವರು ಬರೆದರು.
ಯೌವನದ ಪುಟಗಳಲಿ
ಕನಸುಗಳೇ ತುಂಬಿದವು...
ಹೆತ್ತವರು ಬರೆದರು.
ಯೌವನದ ಪುಟಗಳಲಿ
ಕನಸುಗಳೇ ತುಂಬಿದವು...
ಮಿಕ್ಕೆಲ್ಲಾ
ಪುಟಗಳು
ಮದುವೆ ಮನೆ ಮಕ್ಕಳು
ದುಡುಮೆಗೆ ಮೀಸಲು....
ಮದುವೆ ಮನೆ ಮಕ್ಕಳು
ದುಡುಮೆಗೆ ಮೀಸಲು....
ಕೊನೆಗೂ
ನನಗಾಗಿ
ನನ್ನಿಷ್ಟದಂತೆ
ಒಂದೇ ಒಂದು ಪುಟ
ಬರೆದುಕೊಳ್ಳಲಾಗಲಿಲ್ಲ....
ನನ್ನಿಷ್ಟದಂತೆ
ಒಂದೇ ಒಂದು ಪುಟ
ಬರೆದುಕೊಳ್ಳಲಾಗಲಿಲ್ಲ....
ನನ್ನದೇ
ಬದುಕಿನ ಪುಸ್ತಕ
ನನ್ನದಾಗಲೇ ಇಲ್ಲ.
ನನ್ನದಾಗಲೇ ಇಲ್ಲ.
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ