ಸಖಿ...
ಒಳಿತನ್ನು
ಹೇಳಿದರೆ ಕೇಳುವ
ಸಹನೆ ಇಲ್ಲದವರಿಗೆ
ಏನೇ ಗದ್ದ ತುಟಿ ಹಿಡಿದು
ಮುದ್ದಾಡಿದರೂ
ಪ್ರಯೋಜನವಿಲ್ಲ....!
ಸಹನೆ ಇಲ್ಲದವರಿಗೆ
ಏನೇ ಗದ್ದ ತುಟಿ ಹಿಡಿದು
ಮುದ್ದಾಡಿದರೂ
ಪ್ರಯೋಜನವಿಲ್ಲ....!
ಬದಲಾಗಲಾರೆನೆಂಬ
ಬಂಢರಿಗೆ ದಂಡಿಸಿದರೂ
ನೀಚತನ ಖಂಡಿಸಿದರೂ
ಏನೇನೂ ಉಪಯೋಗವಿಲ್ಲ....!
ಬಂಢರಿಗೆ ದಂಡಿಸಿದರೂ
ನೀಚತನ ಖಂಡಿಸಿದರೂ
ಏನೇನೂ ಉಪಯೋಗವಿಲ್ಲ....!
ಬಾಗಲಾರೆನೆಂಬ
ದುರಹಂಕಾರದ ಮರ
ಬಿರುಗಾಳಿಗೆ ಸಿಕ್ಕಿ
ಬುಡಮೇಲಾಗದೇ
ಬದುಕುಳಿಯುವುದೇ..?
ದುರಹಂಕಾರದ ಮರ
ಬಿರುಗಾಳಿಗೆ ಸಿಕ್ಕಿ
ಬುಡಮೇಲಾಗದೇ
ಬದುಕುಳಿಯುವುದೇ..?
ತಗ್ಗಿ ಬಗ್ಗಿ
ಅಲ್ಲಾಡುವ
ಹುಲ್ಲಿನ ಗರಿಕೆ
ತಲೆ ಎತ್ತಿ ನಿಲ್ಲುವ ಪರಿ
ದುರಹಂಕಾರಿಗಳಿಗೆ
ಪಾಠವಾಗಲಾರದೇ...?
ಹುಲ್ಲಿನ ಗರಿಕೆ
ತಲೆ ಎತ್ತಿ ನಿಲ್ಲುವ ಪರಿ
ದುರಹಂಕಾರಿಗಳಿಗೆ
ಪಾಠವಾಗಲಾರದೇ...?
-ಶಶಿಕಾಂತ ಯಡಹಳ್ಳಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ