ಮಂಗಳವಾರ, ಮೇ 19, 2015

ಸಖಿ ಗೀತೆ....78

ಸಖಿ....

ಯಾಕೆ
ನಡುರಾತ್ರಿ ನನ್ನ
ಮೊಬೈಲ್ ಸದ್ದಿಗೆ
ದಿಗ್ಗನೆದ್ದು ಕುಳಿತು
ಓದಿ ಕೇಳುತಿರುವೆ
'
ಯಾವಳ್ರೀ ಅವಳು
ನನ್ನ ಸವತಿ ನಿಮಗೆ
ಬ್ಯೂಟಿಪುಲ್ ಅಂತಾ 
ಮೆಸೇಜ್ ಕಳ್ಸಿರೋದು'....

ಬೇಡ ಸಖಿ,
ಸಂದೇಹ ಬಿಸಾಕು
ಸರಿಯಾಗಿ ಓದು ಸಾಕು
'
ಅದು ಬ್ಯೂಟಿಪುಲ್ 
ಅಲ್ಲ ಬ್ಯಾಟರಿಪುಲ್''...

ಅನುಮಾನ ಎಂಬೊ
ಮಹಾಮಾರಿಗೆ ಮದ್ದಿಲ್ಲ.
ಸಂದೇಹ ಪೀಡಿತಳ
ಸಖನಿಗೆ ನಿದ್ದಿಲ್ಲ.

-ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ