ಮಂಗಳವಾರ, ಮೇ 19, 2015

ಸಖಿ ಗೀತೆ.....71

ಸಖಿ....

ಕಾಲ ಎಲ್ಲರಿಗೂ
ಒಂದೇ ರೀತಿ
ಎನ್ನುವುದೆಲ್ಲಾ ಸುಳ್ಳು....

ಮಿಲನದ ರಾತ್ರಿ
ಕಾಲ ಕಾಲಿಗೆ ಚಕ್ರ
ಕಟ್ಟಿಕೊಂಡು ಓಡುತ್ತದೆ.

ವಿರಹದ ರಾತ್ರಿ
ಕಾಲಕ್ಕೆ ಆಮೆ ನಡಿಗೆ
ನಿಶ್ಚಲವಾಗಿ ಕಾಡುತ್ತದೆ.

-ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ