ಮಂಗಳವಾರ, ಮೇ 19, 2015

ಸಖಿ ಗೀತೆ....70

ಸಖಿ...

ಸಸ್ಯಾಹಾರ ಸಾತ್ವಿಕ,
ಮಾಂಸಾಹಾರ ಹಿಂಸಾತ್ಮಕ
ಎಂದೆನ್ನುವ
ಮಠಾಧೀಶರುಗಳೇ ಕೇಳಿ....

ದನ ತಿನ್ನುವವರು
ದನವಾಗಿ ದುಡಿದರು
ಹಾಲು ತುಪ್ಪ ತಿಂದವರು
ಹಾವಾಗಿ ಮೆರೆದರು.....

ಸಾತ್ವಿಕತೆ ಆಹಾರದಲ್ಲಿಲ್ಲ
ದುಡಿದುನ್ನುವುದರಲ್ಲಿದೆ.
ಅಸಮಾನತೆ ತಿನ್ನುವುದರಲ್ಲಿಲ್ಲ
ಕರ್ಮಸಿದ್ದಾಂತದಲ್ಲಿದೆ.....!!

-ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ