ಸೋಮವಾರ, ಮೇ 18, 2015

ಸಖೀ ಗೀತೆ....7





ಸಖಿ....


  
ಎಂದೋ ಎಲ್ಲೋ 

ಪ್ರೇಮಿಗಳಿಬ್ಬರು
ಬದುಕಲಾಗದೇ
ನೆಗೆದು ಬಿದ್ದು ಸತ್ತರಂತೆ.....!

ಜಗದೆಲ್ಲ ಪ್ರೇಮಿಗಳು
ಪ್ರೇಮಿಗಳ ದಿನವೆಂದು
ಹರುಷದಿಂದ ಹಾಡಿ
ನಲಿದು ಕುಣಿವರಂತೆ....!!

ಸೂತಕದ ದಿನ ಸರಕು
ಮಾರುವ ದಲ್ಲಾಳಿಗಳು
ಪ್ರೇಮದ ಹೆಸರಲಿ
ವ್ಯಾಪಾರ ನಿರತರಂತೆ.....!!!

ಜಾಗತೀಕರಣದ ದಿನಗಳಿವು,
ಮಾರುಕಟ್ಟೆ ಪ್ರಮುಖವು
ಜಾಗತಿಕ ಸಂತೆಯಲಿ
ಪ್ರೀತಿ ಮಾರಾಟದ ಸರಕಂತೆ...!!!!


-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ