ಮಂಗಳವಾರ, ಮೇ 19, 2015

ಸಖಿ ಗೀತೆ.....68

ಸಖಿ....

ನಾನಿವತ್ತು ಖುಷಿಯಾಗಿದ್ದೇನೆಂದರೆ
ಎಲ್ಲಾ ಅವಳಿಚ್ಚೆ,...

ಎಲ್ಲವನ್ನೂ ಸಹಿಸಿಕೊಂಡಿದ್ದೇನೆ
ಹೊತ್ತೊತ್ತಿಗೂ ಹೊಂದಾಣಿಕೆಯಾಗಿದ್ದೇನೆ
ಸ್ವಾತಂತ್ರ್ಯ ಸ್ವಾಭಿಮಾನ ಬಿಟ್ಟಿದ್ದೇನೆ
ಇಗೋ ಇಸಂಗಳನ್ನು ಬಿಟ್ಟುಕೊಟ್ಟಿದ್ದೇನೆ....

ಆಕೆಯೂ ನನ್ನಿಂದ ಖುಷಿಯಾಗಿದ್ದಾಳೆಂದರೆ
ಎಲ್ಲಾ ನನ್ನಿಚ್ಚೆ....

ಅವಳ ದ್ವೇಷ ಅಸೂಯೆ
ಅಸಹಕಾರ ಅಹಂಕಾರ
ಆರೋಪ ಅನುಮಾನಗಳನ್ನೆಲ್ಲಾ
ನಿರ್ಲಕ್ಷಿಸಿದ್ದೇನೆ....

ಅಂತರಂಗಕ್ಕಾದ ಅವಮಾನಗಳ
ಆಘಾತಗಳ ಸಹಿಸಿಕೊಂಡೂ 
ಹೃದಯ ಆಕೆಗಾಗಿ ಮಿಡಿಯುತ್ತಿದೆ.....

ನುಂಗಿಕೊಂಡ ನೋವುಗಳ
ಪಲ್ಲಕ್ಕಿ ಹೊತ್ತು
ಬದುಕು ಸಾಗುತ್ತಿದೆ.

-ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ