ಮಂಗಳವಾರ, ಮೇ 19, 2015

ಸಖಿ ಗೀತೆ.....67

ಸಖಿ.....

ನನಗನ್ನಿಸುತ್ತಿದೆ
ಮತ್ತೊಮ್ಮೆ ಈ ತಪ್ಪು ಮಾಡಲಾರೆ
ಮನುಷ್ಯನಾಗಿ ಇನ್ನೆಂದೂ ಹುಟ್ಟಲಾರೆ.
ಆದರೇನು ಮಾಡುವುದು 
ಹುಟ್ಟು ನನ್ನ ಕೈಯಲ್ಲಿಲ್ಲವಲ್ಲಾ...?

ನಾನಂದುಕೊಳ್ಳುತ್ತೇನೆ...
ಮತ್ತೊಮ್ಮೆ ಇಂತಹ ಪ್ರಯತ್ನ ಮಾಡಲಾರೆ
ಆತ್ಮಹತ್ಯೆಗೆಂದೂ ಪ್ರಯತ್ನಿಸಲಾರೆ.
ಆದರೇನು ಮಾಡುವುದು
ಸಾಯಲೂ ನನ್ನ ಕೈಲಾಗುತ್ತಿಲ್ಲವಲ್ಲಾ.....?

ಅತ್ತ ಬದುಕಲೂ ಆಗದೇ
ಇತ್ತ ಸಾಯಲೂ ಧೈರ್ಯ ಸಾಲದೇ
ತ್ರಿಶಂಕು ಸ್ಥಿತಿ ನನ್ನಂತೆ ಹಲವರದು.
ಬದುಕುವ ಯತ್ನಗಳೆಲ್ಲಾ ಸಾಯುವ ಪ್ರಯತ್ನಗಳಂತೆ ವಿಫಲ.
ಮಾನವ ಜೀವವೆಂದರೆ ಇಷ್ಟೊಂದು ಕೇವಲವಾ?

ಯಾವ ಕಾಣದ ಮಾಯೆ ನಮಗೀ ಗತಿ ತಂದಿದೆ
ಅದ್ಯಾವ ಕರಾಳ ಛಾಯೆ ಕಾಣದಂತೆ ಆವರಿಸಿಕೊಂಡಿದೆ
ಹುಡುಕಬೇಕು ತದುಕಬೇಕು 
ಸ್ವಾಭಿಮಾನಿ ಸಮಾನತೆಯ ಬದುಕು 
ಎಂದೆಂದೂ ನಮ್ಮದಾಗಲೇಬೇಕು..!

-ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ