ಮಂಗಳವಾರ, ಮೇ 19, 2015

ಸಖಿ ಗೀತೆ.....66

ಸಖಿ....

ಜಗದಲಿರುವುದೆಲ್ಲಾ ತನಗಾಗಿ
ತನ್ನ ಉಪಭೋಗಕ್ಕಾಗಿ 
ಎಂದುಕೊಂಡವ ಭೋಗಿ
ಬದುಕುತ್ತಾನೆ ಭೂಮಿಗೆ ಭಾರವಾಗಿ.....

ಎಷ್ಟಿದ್ದರೇನಂತೆ ನನ್ನದಲ್ಲದ ಮೇಲೆ
ಸಿಕ್ಕಷ್ಟೇ ಜೀಕುವೆ ಬದುಕಿನುಯ್ಯಾಲೆ
ಎಂದುಕೊಂಡವ ಜೋಗಿ
ಜೀವಿಸುತ್ತಾನೆ ತಲೆಬಾಗಿ......

ಹೆರವರಿಗೆ ಹೊರೆಯಾಗದ ಬದುಕು
ಯಾರಿಗೂ ನೋವಾಗದ ನಡತೆ
ರೂಢಿಸಿಕೊಂಡವ ಯೋಗಿ
ಇರುವುದೆಲ್ಲಾ ಬಿಟ್ಟಿರುತ್ತಾನೆ ಹಾಯಾಗಿ......

-ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ