ಮಂಗಳವಾರ, ಮೇ 19, 2015

ಸಖಿ ಗೀತೆ...62

ಸಖಿ...

ಎಳ್ಳು ಬೆಲ್ಲ ತಿಂದು
ಒಳಿತು ಮಾತಾಡೋಣ...

ಕಬ್ಬು ಸಕ್ಕರೆ ಸಿಹಿಯಲಿ
ಸವಿಯಾಗಿ ಬಾಳೋಣ...

ಸಂಕ್ರಾಂತಿ ದಿನದ ಈ ಮಾತು
ವರ್ಷ ಪೂರಾ ಕಾಪಾಡೋಣ.

ಮಾತು ಬರೀ ಮಾತಾಗದೇ
ಅನುಕ್ಷಣದ ಆಚರಣೆಯಾಗಲಿ.

ಸಂಕ್ರಾಂತಿ ಕೇವಲ ಹಬ್ಬವಾಗದೇ
ಮನಸು ಕಟ್ಟುವ ಸೇತುವೆಯಾಗಲಿ.

-ಶಶಿಕಾಂತ ಯಡಹಳ್ಳಿ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ