ಮಂಗಳವಾರ, ಮೇ 19, 2015

ಸಖಿ ಗೀತೆ....61

ಸಖಿ....

ಶುಭವಾಗತೈತೆ ಶುಭವಾಗತೈತೆ
ಸಂಕ್ರಾಂತಿಯ ನಂತರ
ಎಲ್ಲಾ ಶುಭವಾಗತೈತೆ....

ಅದೆಷ್ಟೋ ವರ್ಷಗಳಿಂದ
ಹೀಗೆ ಆಶಾವಾದಿಯಾಗಿ
ಶುಭಹಾರೈಸುತ್ತಲೇ ಇದ್ದೇವೆ...

ಶುಭವಾಗದವರು 
ಬೇಸರಿಸಿಕೊಳ್ಳಬೇಡಿ ಮುಂದಿನ 
ಸಂಕ್ರಾಂತಿವರೆಗೂ ಕಾಯ್ದುನೋಡಿ.....

ಆಗಲೂ ಸರಿಹೋಗದಿದ್ದರೆ
ಮತ್ತೊಂದು ವರ್ಷ ಮಗದೊಂದು ವರ್ಷ
ಆಶಾವಾದವೇ ಬದುಕು...

ಈ ಸಲವೂ ಹಾಗೆಯೇ
ಮತ್ತೆ ಮತ್ತೆ ಮರಳಿ
ಕಣಿ ಹೇಳುತ್ತಿದ್ದೇವೆ...

ಶುಭವಾಗತೈತೆ ಶುಭವಾಗತೈತೆ
ಸಂಕ್ರಾಂತಿಯ ನಂತರ
ಎಲ್ಲಾ ಶುಭವಾಗತೈತೆ....


-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ