ಮಂಗಳವಾರ, ಮೇ 19, 2015

ಸಖಿ ಗೀತೆ....50

ಸಖಿ....

ಕೆಲವಾರು ಸಲ
ನೋವು ಕೊಟ್ಟು ನಕ್ಕವರ
ಕಂಡು ನಕ್ಕಿದ್ದೇನೆ.

ಬದುಕು ಧಾವಾನಲ 
ಪರಹಿಂಸೆಯೇ ಇಲ್ಲಿ ಜೀವಜಲ
ಗೊತ್ತಿದ್ದರೂ ಬದುಕಿದ್ದೇನೆ.

ಪ್ರತಿಶೋಧದ ಬದಲು
ಪ್ರತಿರೋಧದ ಕಿಚ್ಚನ್ನೆದೆಯಲ್ಲಿ
ಬೆಚ್ಚಗಿಟ್ಟುಕೊಂಡಿದ್ದೇನೆ.

-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ