ಸೋಮವಾರ, ಮೇ 18, 2015

ಸಖಿ ಗೀತೆ.....40

ಸಖಿ...

ನನಗೂ ಹೊಸವರುಷ
ಸಂಭ್ರಮಿಸಬೇಕೆಂಬಾಸೆ,
ಮನಸ್ಸು ಒಪ್ಪುತ್ತಿಲ್ಲ.

ಹಿಂಸೆ ಆತಂಕ ಅಭದ್ರತೆಯ
ಬದುಕು ಉರಿಯುತ್ತಿದೆ
ನೆಮ್ಮದಿ ಸಿಕ್ಕುತ್ತಿಲ್ಲ.

ಜಾತಿಗಳ ನಡುವೆ ಬೇಲಿಗಳಿವೆ
ಮನಸುಗಳ ನಡುವೆ ಗೋಡೆಗಳಿವೆ
ಹರುಷದ ದಿನಗಳು ದಕ್ಕುತ್ತಿಲ್ಲ.

ಸಾವಿರಾರು ಸತ್ತ ಕನಸುಗಳಿವೆ
ನೂರಾರು ನೀಗಿಕೊಂಡ ನಿರೀಕ್ಷೆಗಳಿವೆ
ಸಂಭ್ರಮಿಸಲು ಕಾರಣ ಸಿಗುತ್ತಿಲ್ಲ.

ನನಗೂ ಹೊಸವರುಷ
ವಿಜ್ರಂಬಿಸುವ ಆಸೆ
ಮನಸ್ಸು ಸಮ್ಮತಿಸುತ್ತಿಲ್ಲ.

-ಶಶಿಕಾಂತ ಯಡಹಳ್ಳಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ